ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.
✍🏻 ಸುಭಿಕ್ಷ್.ರೈ.ಪಿ
Image Credit: Respected Owner
ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ವ್ಯಕ್ತಿ ನಮ್ಮೆಲ್ಲರ ಹೆಮ್ಮೆಯ ಭಾರತ ಹೃದಯ ಸಾಮ್ರಾಟ್ ಪ್ರಧಾನಿ ಶ್ರೀ ನರೇಂದ್ರ ಮೋದಿ. ಯಾರು ಊಹಿಸಿರದ ರೀತಿಯಲ್ಲಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತ ದಿಟ್ಟ ನಿರ್ಧಾರಗಳನ್ನು ಕೈಗೊಂಡವರು ಮೋದಿಜೀ. ರಾಜಕೀಯವಾಗಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರು ತನ್ನ ಕುಟುಂಬಕ್ಕಾಗಿ ಯಾವುದೇ ಆಸ್ತಿ ,ಸಂಪತ್ತನ್ನು ಗಳಿಸದ ದೇಶವೇ ನನ್ನ ಆಸ್ತಿ ಎಂದು ದುಡಿಯುತ್ತಿರುವ ದಣಿವರಿಯದ ಜಗಮೆಚ್ಚಿದ ನಾಯಕ. ಪ್ರಧಾನಿಯಾದ ಬಳಿಕ ಇವರು ಅನುಷ್ಟಾನಕ್ಕೆ ತಂದ ಯೋಜನೆಗಳು ಪ್ರತೀ ಹಳ್ಳಿಯ ಬಡ ಜನರಿಗೆ ತಲುಪುತ್ತಿದೆಯೆಂದರೆ ಅದು ಅವರ ಭ್ರಷ್ಟಚಾರ ರಹಿತ ಆಡಳಿತಕ್ಕೆ ನಿದರ್ಶನ. ಸ್ವಂತಕ್ಕೆ ಏನನ್ನು ಬಯಸದ ಸರ್ವಸ್ವವನ್ನು ತಾಯಿ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟವರು ಇಂದು ನಮ್ಮ ದೇಶದ ಪ್ರಧಾನಮಂತ್ರಿಗಳಾಗಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಸೌಭಾಗ್ಯ. ಮೋದಿ ಜೀ ಯವರು ಬೆಳೆದು ಬಂದ ಹಾದಿ ಪ್ರತಿಯೊಬ್ಬರು ರೋಮಂಚನಗೊಳ್ಳುವಂತದ್ದು.ದೇಶಭಕ್ತ ಯುವಕರಿಗೆ ಅವರ ವ್ಯಕ್ತಿತ್ವವೇ ಸ್ಪೂರ್ತಿ.
ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿ ಯುವಕನಾಗುವಷ್ಟರಲ್ಲಿ ಸಂಘದ ವಿಚಾರಧಾರೆಗಳಿಂದ ಪ್ರಭಾವಿತರಾಗಿ ,ಸಂಘದಿಂದ ಜೀವನದ ಉದ್ದೇಶವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಮೋದಿ ಜೀ ಯವರಿಗೆ ಜನರ ಭಾವನೆಗಳನ್ನು ಅರ್ಥೈಯಿಸಿಕೊಳ್ಳುವ, ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗು ಯೋಜನೆಗಳನ್ನು ರೂಪಿಸುವ ಸಾಮರ್ಥ್ಯವಿರುವುದನ್ನು ನಾವೆಲ್ಲರು ಒಪ್ಪಿಕೊಳ್ಳಲೇಬೇಕು.
ಹಿಂದೂ ಧರ್ಮದ ಬಗ್ಗೆ ಬಹಳಷ್ಟು ವಿಷಯ ಜ್ನಾನವಿದೆ ಎಂಬುದು ಪುಸ್ತಕವೊಂದರಲ್ಲಿ ಉಲ್ಲೇಖಿತ ವಿಷಯ. ಕಷ್ಟ ಕಾಲದಿಂದ ಕೂಡಿದ್ದ ಬಾಲ್ಯದಲ್ಲಿ ತನ್ನ ತಂದೆ ನಡೆಸಿಕೊಂಡಿದ್ದ ಪುಟ್ಟ ಚಹಾದ ಅಂಗಡಿಯಲ್ಲಿ ತಾನು ಸೇರಿ ಸಹಾಯಮಾಡುತ್ತಿದ್ದವರು. ಯುದ್ಧ ಸಂದರ್ಭ ದಲ್ಲಿ ರೈಲ್ವೆ ನಿಲ್ದಾಣದಲ್ಲಿ ಸ್ವಯಂ ಪ್ರೇರೇಪಿತರಾಗಿ ಸೈನಿಕರಿಗೆ ಮತ್ತು ಪ್ರವಾಹದಿಂದ ನಲುಗಿದ್ದ ಗುಜರಾತ್ ಜನತೆಗೆ ತನ್ನ ಕೈಲಾದ ಸೇವೆ ಸಲ್ಲಿಸಿದ್ದರೆಂಬುದು ನಾನು ತಿಳಿದುಕೊಂಡ ವಿಷಯ.ಒಟ್ಟಿನಲ್ಲಿ ಬಾಲಕರಾಗಿದ್ದಾಗಲೇ ಉದಾರ ಮನಸ್ಸಿನಿಂದ ಕೆಲಸ ನಿರ್ವಹಿಸಿದ್ದು ಅವರ ಸೇವಾಮನೋಭಾವಕ್ಕೆ ಸಾಕ್ಷಿ.
ಎಬಿವಿಪಿ ಯ ನಾಯಕರಾಗಿ ಹಲವಾರು ಚಳುವಲಿ,ಹೋರಾಟಗಳನ್ನು ಕೈಗೊಂಡಿದ್ದರು. ಅಂದಿನ ಸರ್ಕಾರ ತುರ್ತುಸಂದರ್ಭ ಘೋಷಿಸಿದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಶಿಷ್ಟವಾಗಿ ಹೋರಾಟ ನಡೆಸಿದ ಸಮಯದಲ್ಲಿ ನರೇಂದ್ರ ಮೋದಿ ಯವರ ಪಾತ್ರ ಮಹತ್ತರವಾಗಿತ್ತು ಎಂಬುದನ್ನು ಮರೆಯಬಾರದು.ಹೀಗೆ ಆರೆಸ್ಸೆಸ್ ನ ಸಣ್ಣ ಕಾರ್ಯಕರ್ತರಾಗಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದುಬಂದ ಮೋದಿ ಜೀ ಇಂದು ಮಾಡುತ್ತಿರುವ ಮೋಡಿ ಎಲ್ಲರೂ ಕಂಡಿರುವುದೆ!
ಆರೆಸ್ಸೆಸ್ ನಿಂದ ಬಿಜೆಪಿಯ ಜವಾಬ್ಧಾರಿಗಳನ್ನು ವಹಿಸಿ ಪಕ್ಷವನ್ನು ಸಂಘಟಿಸಿ ಮುಂದೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಕೂಡ ಇಡೀ ದೇಶವೆ ಹಾಡಿ ಹೊಗಳುವಂತಹದ್ದು. ತದನಂತರ ಬಹುಕಾಲ ಆ ರಾಜ್ಯದ ಮುಖ್ಯಮಂತ್ರಿಯಾಗಿ ಅಮೂಲಾಗ್ರ ಬದಲಾವಣೆಗೆ ಶ್ರಮಿಸಿ ಹೇಗೆ ಪ್ರಥಮ ಬಾರಿಗೆ ಶಾಸಕರಾಗಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರೋ ಹಾಗೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಹುಮತಗಳೊಂದಿಗೆ ಪ್ರಥಮ ಬಾರಿ ಸಂಸದರಾಗಿ ಭವ್ಯ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದು ಅದ್ಭುತವೇ!
ಇಷ್ಟು ಮಾತ್ರವಲ್ಲದಿದ್ದರೂ ಇವರು ಸಾಗಿದ ದಾರಿ,ಮಾಡಿದ ಅಭಿವೃದ್ದಿ ಕಾರ್ಯ, ಸಾಧನೆಗಳನ್ನು ಇವರ ಬಗೆಗಿನ ಕೆಲವು ಬರಹಗಳು,ಪುಸ್ತಕಗಳು ತಿಳಿಸಿಕೊಡುತ್ತವೆ.ಹೀಗೆ 2014 ರ ನಂತರ ಇಲ್ಲಿಯವರೆಗೆ ನಡೆದದ್ದು ಎಲ್ಲವು ನಾವು ನೀವು ತಿಳಿದಿರುವ ,ಪ್ರತಿಯೊಬ್ಬರ ಮನಸ್ಸಲ್ಲೂ ಅಚ್ಚಲಿಯದೆ ಉಳಿದಿರುವ ಮನೆ ಮಾತಾಗಿರುವ ಪ್ರಗತಿಶೀಲ ಅಭಿವೃದ್ಧಿ ಕಾರ್ಯಗಳು.ಇಂದು ಅತೀ ಹೆಚ್ಚು ಯುವ ಸಮೂದಾಯವನ್ನು ಪಕ್ಷ, ರಾಷ್ಟ್ರ ಪರ ಕೆಲಸ ಹಾಗು ತನ್ನತ್ತ ಸೆಳೆದ ನಾಯಕರಂತ ಇದ್ರೆ ಅದು ಮೋದಿ ಜೀ ಮಾತ್ರ.ಭಾರತದ ಶ್ರೀಮಂತ ಸಂಸ್ಕೃತಿ,ಸಂಸ್ಕಾರಗಳನ್ನು ವಿಶ್ವಕ್ಕೆ ಪರಿಚಯಿಸಿದ್ದು ಮೋದಿ ಜೀ ಗೆ ಭಾರತದ ಸಂಸ್ಕೃತಿಗಳ ಮೇಲಿರುವ ಅಪಾರವಾದ ಗೌರವವನ್ನು ಸೂಚಿಸುತ್ತದೆ.ತಾನು ನಂಬುವ ಧರ್ಮದ ಸಂಸ್ಕೃತಿಯನ್ನು ಇಡೀ ದೇಶ- ವಿದೇಶಗಳು ಅನುಸರಿಸಬೇಕೆಂದು ಬಯಸುವ ಅಪ್ಪಟ ಹಿಂದೂ ಪ್ರೇಮಿ.ಸಣ್ಣ ಮಗುವಿನಿಂದ ಹಿಡಿದು ವೃದ್ದರ ಬಾಯಲ್ಲೂ ಮೋದಿ ! ಮೋದಿ! ಎಂಬ ಘೋಷ ಮೊಳಗಿಸಿ ಮಂತ್ರಮುಗ್ದರನ್ನಾಗಿಸಿದ, ಮನದ ಮಾತು ಎಂಬ ಕಾರ್ಯಕ್ರಮದ ಮೂಲಕ ಮನೆ ಮನಗಳಿಗೂ ತಲುಪಿದ,ತನ್ನ ಸಂದೇಶಗಳನ್ನು ಪ್ರತೀ ಭಾರತೀಯ ಪ್ರಜೆಯು ಅನುಸರಿಸುವಂತೆ ಮಾಡಿದ ಸರಳ ಸಜ್ಜನ ವ್ಯಕ್ತಿ.ಇವರ ಉಜ್ವಲ ಯೋಜನೆ,ಬಡವನ ಮನೆಯ ಕತ್ತಲನ್ನು ತೊಲಗಿಸಿದ ಭಾಗ್ಯಜ್ಯೋತಿ,ಕೆಲವೊಂದಷ್ಟು ವಿಮಾ ಸೌಲಭ್ಯ,ಕಿಸಾನ್ ಸಮ್ಮಾನ್,ಜನಧನ್ ಹೀಗೆ ಹತ್ತು ಹಲವಾರು ಯೋಜನೆಗಳು ಮೋದಿ ಯವರಿಗೆ ಬಡವರ ಬಗ್ಗೆ ಇರುವ ಅಪಾರ ಕಾಳಜಿ,ಉದಾರ ಮನಸ್ಸು ಮತ್ತು ಕಷ್ಟ ಕಾಲದಲ್ಲಿ ಸ್ಪಂದಿಸುವ ವ್ಯಕ್ತಿತ್ವ ಸೇವಾಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.ತನ್ನ ಇಡೀ ರಾಜಕೀಯ ಜೀವನದಲ್ಲಿ ಭ್ರಷ್ಟಚಾರದ ಆರೋಪವಿಲ್ಲದ ಹಗಳಿರುಳೆನ್ನದೆ ದೇಶಕ್ಕಾಗಿ ದುಡಿಯುತ್ತಿರುವ ನಿಷ್ಕಲ್ಮಶ ಹೃದಯಿ.ಇವರ ನಾಯಕತ್ವ ಗುಣಕ್ಕೆ ಇಡೀ ವಿಶ್ವವೇ ತಲೆಬಾಗುತ್ತದೆ ಎಂದರೆ ಇವರೊಬ್ಬ ಅದ್ಭುತ ವ್ಯಕ್ತಿಯೇ.
ಸಮೃದ್ಧ,ಸಮರ್ಥ ವಿಶ್ವವನ್ನೆ ಮುನ್ನಡೆಸುವ ವಿಶ್ವಗುರು ಭಾರತವಾಗಬೇಕೆಂಬ ಕನಸು ಕಂಡು ನನಸಾಗಿಸಲು ಅವಿರತ ಶ್ರಮಿಸುತ್ತಿರುವವರು ನಮ್ಮ ಮೋದಿ ಜೀ. ದೇಶಕ್ಕಾಗಿ ಇವರು ದುಡಿಯುತ್ತಿರುವುದನ್ನು ಕಂಡು ಮಹಾನ್ ನಾಯಕರುಗಳೇ ಬೆರಗಾಗಿದ್ದಾರೆ.ಇವರಿಗಿರುವ ಜನಮನ್ನಣೆ ಯನ್ನು ಕಂಡು ವಿಪಕ್ಷಗಳಂತು ಕೈಚೆಲ್ಲಿ ಕುಳಿತಿದೆ.ಎಷ್ಟೇ ದೇಶದ್ರೋಹಿ ವಿರೋಧಿಗಳಿದ್ದರು ಸದಾ ಇವರನ್ನು ಪ್ರೀತಿಸುವ, ಬೆಂಬಲಿಸುವ ರಾಷ್ಟ್ರ ಪ್ರೇಮಿಗಳ ಆಶಿರ್ವಾದವೇ ಇವರಿಗೆ ಶ್ರೀ ರಕ್ಷೆ ಎಂದರೆ ತಪ್ಪಾಗಳಾರದು. ಮೋದಿಜಿಗಿರುವ ಶಕ್ತಿಯನ್ನು , ಇವರು ಕೈಗೊಳ್ಳುತ್ತಿರುವ ದಿಟ್ಟ ನಿರ್ಧಾರಗಳನ್ನು ಕಂಡು ದೇಶದ ಬೆಳವಣಿಗೆ ಸಹಿಸದ ಉಗ್ರರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ಪಾಪಿ ಉಗ್ರರ ಜೀವ ಬೆದರಿಕೆಗಳಿಗೆ ಬಗ್ಗದೆ, ಇದ್ಯಾವುದನ್ನು ಲೆಕ್ಕಿಸದೆ ಪ್ರತೀ ದೇಶವಾಸಿಯೂ ಕೂಡ ಸಮಾನ ಸೌಲಭ್ಯ ಪಡೆಯಬೇಕೆಂದು ತುಡಿತ ಹೊಂದಿರುವ ,ನಮ್ಮ ದೇಶದ ಜನರನ್ನು ವಿದೇಶಿಯರು ಗೌರವಿಸುವಂತಾಗಬೇಕೆಂದು ಬಯಸುವ ಜನಸೇವಕ.ಜನರು ಇಂದು ಮೋದಿ ಜೀ ಯವರನ್ನು ಸ್ವೀಕರಿಸಿದ್ದನ್ನು ಕಂಡರೆ ಅದೇ ಒಂದು ಹೆಮ್ಮೆ. ಒಟ್ಟಾರೆ ನಾವು ಹೇಳಬೇಕೆಂದರೆ ಮೋದಿಜೀ ಕೇವಲ ವ್ಯಕ್ತಿ ಮಾತ್ರವಲ್ಲ ಅವರೊಂದು ಅದ್ಭುತ ಶಕ್ತಿ! ಇಂದು ಮನೆ ಮನೆಗಳಲ್ಲಿ ಮೋದಿಯವರ ಕೆಲಸ ಕಾರ್ಯಗಳನ್ನು ಶ್ಲಾಘಿಸಬೇಕಿದ್ರೆ ಭಾರತ ಒಂದು ಸಮರ್ಥ ನಾಯಕತ್ವದಲ್ಲಿ ಮುಂದುವರಿಯುತ್ತಿದೆಯೆಂದು ತಿಳಿಯಬಹುದು. ಇವರ ರಾಷ್ಟ್ರ ಸೇವೆ ನಮ್ಮಂತ ಯುವ ಜನರಿಗೆ ಸ್ಪೂರ್ತಿಯಾಗಲಿ.ನಮ್ಮ ದೇಶ ಇತರೆಲ್ಲ ರಾಷ್ಟ್ರಗಳ ನಡುವೆ ಉಜ್ವಲವಾಗಿ ಪ್ರಜ್ವಲಿಸಬೇಕೆಂಬ ಕನಸಿಗೆ ನಾವೆಲ್ಲರು ಜೊತೆಯಾಗೋಣ. ಸಮೃದ್ಧ,ಸಮರ್ಥ,ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಭವ್ಯ ಭಾರತ ನಿರ್ಮಿಸೋಣ. ಆದಷ್ಟು ಶೀಘ್ರವಾಗಿ ರಾಮಮಂದಿರ ನಿರ್ಮಾಣಗೊಂಡು ರಾಮರಾಜ್ಯವಾಗಲಿ ನನ್ನಯ ಭಾರತ.
🚩 ಜೈ ಹಿಂದೂ🚩
🙏🏻 ಜೈ ಭಾರತ ಮಾತೆ 🙏🏻
----------------------------------S®P-------------------------------
Comments
Post a Comment