ಯುದ್ಧ ಭೂಮಿಯಲ್ಲಿ ವರದಿಗಾರಿಕೆಯೆಂಬ ಎದೆಗಾರಿಕೆ... ✍ಸುಭಿಕ್ಷ್ ರೈ ಪಿ
ನೇರ, ದಿಟ್ಟ, ನಿರಂತರ ಎಂಬ ಸುವರ್ಣ ನ್ಯೂಸ್ನ ವಾಕ್ಯದಂತೆ ಅಜಿತ್ ಹನುಮಕ್ಕನವರ್ ನೇರವಾಗಿ, ದಿಟ್ಟತನದಿಂದ, ನಿರಂತರವಾಗಿ ಇಸ್ರೇಲ್ ಕದನ ಭೂಮಿಯಿಂದ ಯುದ್ಧ ವರದಿಗಾರಿಕೆಯನ್ನು ಮಾಡುತ್ತಿದ್ದರೆ ಅದ್ಯಾಕೋ ಅಕ್ಷರ ರಾಕ್ಷಸ ರವಿಬೆಳಗೆರೆಯವರ ಕಾರ್ಗಿಲ್ನಲ್ಲಿ ಹದಿನೇಳು ದಿನಗಳು(ಯುದ್ಧ ವರದಿ), ದಳವಿ ಯವರ ಹಿಮಾಲಯನ್ ಬ್ಲಂಡರ್ (ಯುದ್ದ ಇತಿಹಾಸ) ಕನ್ನಡಾನುವಾದ ಓದಿದಾಗ ಆದ ರೋಮಾಂಚನದ ಅನುಭವ ಈಗ ಮತ್ತೆ ಆಗುತ್ತಿದೆ. ಸ್ಮಶಾನದಂತಾದ ಇಸ್ರೇಲ್, ಪ್ಯಾಲೇಸ್ತೀನ್ ರಣಭೂಮಿಯ ಚಿತ್ರಣ ಕಣ್ಣೆದುರಿಗಿದೆ. ಬೆಳಗೆರೆಯವರ ಕಾರ್ಗಿಲ್ ಕಥನವೆ ಕಣ್ಣಿಗೆ ಕಟ್ಟಿದಂತೆ ಯುದ್ಧ ಭೂಮಿಯ ಅನುಭವವನ್ನು, ಕೆಚ್ಚೆದೆಯ ಸೈನಿಕರ ಕಿಚ್ಚನ್ನು ತೆರೆದಿಟ್ಟರೆ ಈಗ ದೃಶ್ಯ ಮಾದ್ಯಮದ ಮೂಲಕ ನಮ್ಮ ಮುಂದೆ ಅಂತಹದೆ ಭೀಕರ, ಭಯಪೀಡಿತ, ನಿರಂತರ ರಣೋತ್ಸಾಹದಲ್ಲಿರುವ, ಸೇಡಿಗಾಗಿ ಹಪಹಪಿಸುತ್ತಿರುವ ಕದನ ಭೂಮಿಯಿಂದ ನೇರ ವರದಿಯನ್ನು ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ದಿಟ್ಟ ಪತ್ರಕರ್ತ ಅಜಿತ್ ಹನುಮಕ್ಕನವರ್ ಹಾಗೂ ಅವರ ಜೊತೆಯಾದ ಕ್ಯಾಮಾರ ಮ್ಯಾನ್ ಮೋಹನ್ ರವರು ಅದೇ ರವಿಬೆಳಗೆರೆಯವರ ಸಾಲಿನಲ್ಲಿ ಅದಕ್ಕಿಂತಲು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಕಾರಣ ಅವರಿರುವ ಜಾಗ. ಅದು ತಾಯ್ನಾಡು ಅಂತು ಮೊದಲೆ ಅಲ್ಲ.! ಹೇಳಿ ಕೇಳಿ ಯಾವ ಕ್ಷಣದಲ್ಲಾದರು, ಏನಾದರು ಕ್ಷಣಾರ್ಧದಲ್ಲಿ ಸಂಭವಿಸಿ ಹೋಗಬಹುದಾದ ಕಡಲಾಚೆಗಿನ ನಿರಂತರ ದಾಳಿ-ಪ್ರತಿದಾಳಿಯಾಗುತ್ತಿರುವ ಯುದ್ಧಭೂಮಿ. ಅಲ್ಲಿ ನಿಂತು ಮಾಡುವ ವರದಿ ಇಲ್ಲಿ ನೋಡುಗರಿಗೆ ಒಂದು ಹೊಸ ಅನುಭವ ಮಾತ್ರವಲ್ಲ ನಮಗದು ಜಾಗೃತಿಯ ಪಾಠವೂ ಹೌದು. ಇನ್ನು ಭೀಕರ ದಾಳಿಗೆ ತುತ್ತಾದ, ಯುದ್ಧ ಘೋಷಣೆಯಾದ ನಾಡಿಗೆ ತೆರಳುವ ಯೋಚನೆಯೆ ಮನಸ್ಸಿನಲ್ಲೊಂದಷ್ಟು ಆತಂಕ, ಭಯವನ್ನು ಸೃಷ್ಟಿಸಿದರೆ, ರಣಭೂಮಿಯಲ್ಲಿ ನಾಮಾವಶೇಷವಾಗಿ ಬಿದ್ದಿರುವ ಕಟ್ಟಡಗಳ ಬಳಿ, ರಸ್ತೆಯುದ್ದಕ್ಕೂ ಬಿದ್ದಿರುವ ಶೆಲ್ ಗಳ ಮೇಲೆ, ನೇರವಾಗಿ ಬರುತ್ತಿರುವ ರಾಕೆಟ್, ಕ್ಷಿಪಣಿ ದಾಳಿಗಳ ಮಧ್ಯೆ ಇಡೀ ಕರುನಾಡಿನ ಜನತೆಗೆ ಯುದ್ಧದ ಗಂಭೀರತೆ, ರೋಚಕ ಅನುಭವವನ್ನು ತಮ್ಮ ಜೀವಭಯವನ್ನು ತೊರೆದು ತೋರಿಸುತ್ತಿರುವ ಕರುನಾಡಿನ ಹೆಮ್ಮೆ, ದಿಟ್ಟತನದ ರಾಷ್ಟ್ರೀಯವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಮತ್ತು ಕ್ಯಾಮರಮ್ಯಾನ್ ಮೋಹನ್ ರವರ ನಿರ್ಭೀತ ಪತ್ರಿಕೊದ್ಯಮಕ್ಕೆ ನಮ್ಮದೊಂದು ಸಲಾಮ್.
-Subhiksh Rai P
ನೇರ, ದಿಟ್ಟ, ನಿರಂತರ ಪತ್ರಿಕೋದ್ಯಮಕ್ಕೆ ಶುಭವಾಗಲಿ.
Asianet Suvarna News Ajith Hanumakkanavar: unofficial Ajit Hanamakkanavar #KannadaNewsToday #AsianetSuvarnaNews #IsraelPalestineConflict #israelnews #warreporter #WarReport #AjithHanumakkanavar Ajit Hanamakkanavar Ajit Hanamakkanavar Brigade
Comments
Post a Comment