ಬಾವಿಯೊಳಗಿನ ಕಪ್ಪೆಯಂತಿರಬೇಡ, ಒಳಗಿದ್ದು ಹೊರಪ್ರಪಂಚದ ಸವಿಯ ಕಳೆದುಕೊಳ್ಳಬೇಡ..

Captured By: Subhiksh Rai P 
ಸಂಕುಚಿತ ಮನೋಭಾವದಿಂದ ಹೊರಬಂದು ನೋಡಿದಾಗಲೇ ಈ ಪ್ರಪಂಚದ ವಿಸ್ತರತೆಯ ಅರಿವಾಗುವುದು ನಮಗೆ. ಒಂದಷ್ಟು ಯೋಚನೆಗಳನ್ನು ಮನಸ್ಸಿನಲ್ಲಿ  ತುಂಬಿಕೊಂಡು ಇಷ್ಟೆ ಇರುವುದು ನನಗೆಲ್ಲ ತಿಳಿದಿದೆ, ನಾನಿರುವ ರೀತಿಯೆ ಸರಿಯೆಂದುಕೊಂಡು ಬದುಕಿದರೆ, ಬದುಕಿನ ನೈಜ ಸ್ವಾದವನ್ನು ಕಳೆದುಕೊಂಡು ಬಿಡುತ್ತೇವೆ. ಆಲೋಚನೆಗಳು ವಿಶಾಲವಾಗಿದ್ದಾಗಷ್ಟೆ ಮಹಾತ್ಕಾರ್ಯಗಳು ನಡೆಯಲು ಸಾಧ್ಯ.  ಮನಸ್ಸು ತೆರೆದುಕೊಂಡರಷ್ಟೆ ಹೊಸತೊಂದು ಪ್ರಪಂಚದ ಅನುಭವವಾಗಲು ಸಾಧ್ಯ.  Comfort Zone ಬಿಟ್ಟು ಹೊರ ಬಂದರೆ ಅಧ್ಬುತ ಲೋಕವೊಂದು ನಮಗಾಗಿ ತೆರೆದುಕೊಳ್ಳುತ್ತ ಹೋಗುತ್ತದೆ. ಆ zone ನಿಂದ ಹೊರಬರಲು ಸ್ವಲ್ಪ ಕಷ್ಟವಾಗಬಹುದು ಆದರೆ ಅಸಾಧ್ಯವೇನಲ್ಲ. ಎಲ್ಲದಕ್ಕು ನಮ್ಮ ಮನಸ್ಸು ಸಿದ್ಧವಿರಬೇಕಷ್ಟೆ. ಇಲ್ಲಿ ಬಾವಿಯೊಲಗಿನ ಕಪ್ಪೆ ಬಾವಿಯನ್ನೆ ಪ್ರಪಂಚವೆಂದುಕೊಂಡು ಹೊರಬರದೆ ಹೋಗಿದ್ದರೆ ಅದಕ್ಕೆ ಈ ವಿಶಾಲ ಜಗತ್ತಿನ ಸೌಂದರ್ಯದ ಅನುಭವವೆ ಆಗುತ್ತಿರಲಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆ ಜಿಗಿದು ಕುಣಿಯಲು ಅವಕಾಶವೆ ಸಿಗುತ್ತಿರಲಿಲ್ಲ.  ಹೀಗೆ ನಮ್ಮ ಬದುಕಿನಲ್ಲು ಅಷ್ಟೆ ಅವಕಾಶಗಳೆ ಇಲ್ಲ, ಇರುವುದೇ ಇಷ್ಟು ಎಂದುಕೊಂಡರೆ ಹೊಸತನ್ನು ಪ್ರಯತ್ನಿಸುವ, ಕಲಿಯುವ ಉತ್ಸಾಹವೆ ಇರದಿದ್ದರೆ ನಮ್ಮ ಬದುಕು ಬಾವಿಯೊಳಗಿನ ಕಪ್ಪೆಯಂತೆ..!
✍ಸುಭಿಕ್ಷ್ ರೈ ಪಿ

Comments

Popular posts from this blog

ಬಣ್ಣದ ಚಿಟ್ಟೆ, ಅರೆ ಕ್ಷಣ ನನ್ನ ಕಣ್ಣಂಚನು ಸೆಳೆದು ಬಿಟ್ಟೆ..🦋

ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.

ಯುದ್ಧ ಭೂಮಿಯಲ್ಲಿ ವರದಿಗಾರಿಕೆಯೆಂಬ ಎದೆಗಾರಿಕೆ... ✍ಸುಭಿಕ್ಷ್ ರೈ ಪಿ