ಹೊಂದಾಣಿಕೆಗೆ ಮತ್ತೊಂದು ಹೆಸರೇ ಇರುವೆ..
Captured By: Subhiksh Rai P
ಈ ಇರುವೆಗಳ ಸಾಲು ಕಂಡಾಗ ಪ್ರತಿ ಬಾರಿ ಅವುಗಳ ಶಿಸ್ತು, ಶ್ರಮ, ಹೊಂದಾಣಿಕೆಯ ಬದುಕು ಭೂಮಿಯ ಮೇಲಿನ ಅತೀ ಬುದ್ದಿವಂತ ಜೀವಿಯೆಣಿಸಿಕೊಂಡ ಮನುಷ್ಯನು ನಾಚಿಕೊಳ್ಳುವಂತಿರುತ್ತದೆ. ನೀವೇನಾದರೂ ಇರುವೆಗಳ ಸಾಲನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ನಿಮಗೂ ಇವುಗಳ ಜೀವನಶೈಲಿ ಆಶ್ಚರ್ಯ ತಂದಿರಬಹುದು. ಅವು ಆಹಾರಕ್ಕಾಗಿ ಸಾಲಾಗಿ ನಡೆಯುವ ನಡಿಗೆ ಅವುಗಳ ಶಿಸ್ತಿನ ಬಗ್ಗೆ ಪರಿಚಯಿಸುತ್ತದೆ. ಎಷ್ಟೇ ಅವಸರವಿದ್ದರು ಎದುರು-ಬದುರಾದಾಗ ಮುಖತಃ ಭೇಟಿಯಾಗಿ ಪರಸ್ಪರ ಹೊಂದಾಣಿಕೆಯಿಂದ ದಾರಿ ಮಾಡಿಕೊಂಡು ಮುಂದೆ ನಡೆಯುತ್ತದೆ. ಇದೇ ಮನುಷ್ಯನಾಗಿದ್ದರೆ ನಾ ಮುಂದು - ತಾ ಮುಂದು ಎನ್ನುತ್ತ ಜಗಳವಾಡುತ್ತ ಮನಸ್ಸಿನ ನೆಮ್ಮದಿಯನ್ನು ಕೆಡಿಸಿಕೊಳ್ಳುತ್ತ, ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದ. ಪರಿಸರದಲ್ಲಿರುವ ಈ ಪುಟ್ಟ ಜೀವಿಗಿರುವ ಪ್ರಜ್ಞೆ, ಹೊಂದಾಣಿಕೆ, ಬುದ್ದಿಯಿರುವ ಮನುಷ್ಯರಿಗ್ಯಾಕಿಲ್ಲ...? ಇವುಗಳ ಕಂಡಾದರು ಹೊಂದಾಣಿಕೆಯ ಬದುಕು ನಮ್ಮದಾಗಲಿ ಎಂಬುದೊಂದೆ ಆಶಯ...
✍ಸುಭಿಕ್ಷ್ ರೈ ಪಿ


Comments
Post a Comment