ನೀ ದಣಿದು Honey ಗಾಗಿ ಬಂದು, ನನಗೆ Money ಯಾದೆ..😁

 Captured By: Subhiksh Rai P 

🏆Award Winning Shot: Bombay Bunts Association Youth Wing Presents YUVIKA 2020 - Runner Up

ಕೆಲವೊಮ್ಮೆ ನಮ್ಮ ಮನಸ್ಸಿನ ಖುಷಿಗಾಗಿ ಇರುವ ನಮ್ಮ ಹವ್ಯಾಸ ನಮಗರಿವಿಲ್ಲದಂತೆ ಬೆಳೆದು ಕಲೆಯಾಗಿ ಮುಂದೆ ಬದುಕಿಗದುವೆ ದಾರಿಯಾಗಿ ಎಷ್ಟೋ ಮನೆಯನ್ನು ಬೆಳಗಿದ ಉದಾಹರಣೆ ನಮ್ಮ ಕಣ್ಣೆದುರಿಗೆ ನೂರಾರಿದೆ. ಹಾಗಾಗಿ ನಮ್ಮ ಆಸಕ್ತಿಯ ವಿಷಯಗಳು ಬೇರೆಯವರಿಗೆ ಸಣ್ಣಪುಟ್ಟ ವಿಚಾರವಾಗಿದ್ದರು ನಮಗದು ದೊಡ್ಡ ಖುಷಿಯನ್ನು ಕೊಡುವಂತಿದ್ದರೆ ಮುಂದುವರೆಸಿ. ಯಾರಿಗೆ ಗೊತ್ತು ಮುಂದೆ ಅದು ದೊಡ್ಡ ಗೆಲುವನ್ನು , ನಮಗೆ ಗೌರವ ಹೆಸರನ್ನು ತಂದು ಕೊಡಲೂ

ಬಹುದು.

ಹೀಗೆ ಒಮ್ಮೆ ನಾನು ಸುಮ್ಮನೆ ತೋಟದಲ್ಲಿ ಕುಳಿತಿರಲು ಪಕ್ಕದಲ್ಲೆ ಇದ್ದ ಹೂವಿನ ಮಕರಂದವ ಸವಿಯಲು ಬಂದ ಜೇನು ಹುಳವೊಂದನ್ನು ಕಂಡು ಕ್ಯಾಮರ ಕಣ್ಣು ಅದರತ್ತ ಹೋಯಿತು. ಅದರ ಹತ್ತಿರ ಕೈ ಹೋದಾಗ ಹಾರಿ ಹೋಗುವ ಸಂಭವವಿದ್ದುದರಿಂದ ತಾಳ್ಮೆ, ಫೋಕಸ್ ಆಗುವವರೆಗೆ ಕೈ ನಡುಗದಂತೆ ಹಿಡಿಯಲು ಏಕಾಗ್ರತೆಯು ಬೇಕಿತ್ತು. ಹೇಗೋ ಒಂದಷ್ಟು ಹೊತ್ತು ಕಾದು ಕ್ಲಿಕ್ಕಿಸಿದ್ದು ಆಯಿತು. ಅದು ತನಗರಿವಿಲ್ಲದೆ  ಸಿಕ್ಕ ಹೂವಿನ ಮಕರಂದದ ಸಿಹಿಯ ಸವಿಯುತ್ತಿದ್ದರೆ ನಾನು ಪ್ರಕೃತಿಯ ಸೌಂದರ್ಯದ ಈ ನೋಟವನ್ನು ಸವಿಯುತ್ತಿದೆ. ಹೀಗೆ ಸುಮ್ಮನೆ ಅರೆ ಕ್ಷಣದ ಖುಷಿಗಾಗಿ ತೆಗೆದ ಆ ಫೋಟೋ ಮುಂದೆ ಮುಂಬೈ ಯಲ್ಲಿ ನಡೆದ ಪ್ರತಿಷ್ಠಿತ ಬಂಟ್ಸ್ ಅಸೋಸಿಯೇಶನ್ ಯೂತ್ ವಿಂಗ್ ಪ್ರಾಯೋಜಿಸಿದ ಬಹುದೊಡ್ಡ ವೇದಿಕೆ YUVIKA 2020 ರ ಫೋಟೋಗ್ರಫಿ ವಿಭಾಗದಲ್ಲಿ ಸ್ವಾಭಾವಿಕವಾಗಿ ಕ್ಲಿಕ್ಕಿಸಿದ ಫೋಟೋ ಎಲ್ಲರ ಮೆಚ್ಚುಗೆ ಪಡೆದು ದ್ವಿತೀಯ ಸ್ಥಾನ ಅಲಂಕರಿಸಿ ನಗದಿನ ಜೊತೆಗೆ ಸುಂದರ ಸ್ಮರಣಿಕೆಯೊಂದಿಗೆ ಆ ಕ್ಷಣ ಇಂದಿಗೂ ಸ್ಮರಣೀಯವಾಗಿದೆ. ಹೀಗೆ Honey ಗಾಗಿ ಬಂದ ಹುಳುವೊಂದು ನನಗೆ Money ಹೊತ್ತು ತಂದಿತ್ತು...!😊

✍ಸುಭಿಕ್ಷ್ ರೈ ಪಿ





Comments

Popular posts from this blog

ಬಣ್ಣದ ಚಿಟ್ಟೆ, ಅರೆ ಕ್ಷಣ ನನ್ನ ಕಣ್ಣಂಚನು ಸೆಳೆದು ಬಿಟ್ಟೆ..🦋

ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.

ಯುದ್ಧ ಭೂಮಿಯಲ್ಲಿ ವರದಿಗಾರಿಕೆಯೆಂಬ ಎದೆಗಾರಿಕೆ... ✍ಸುಭಿಕ್ಷ್ ರೈ ಪಿ