Posts

ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.

Image
  ✍🏻 ಸುಭಿಕ್ಷ್.ರೈ.ಪಿ Image Credit: Respected Owner       ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ವ್ಯಕ್ತಿ ನಮ್ಮೆಲ್ಲರ ಹೆಮ್ಮೆಯ ಭಾರತ ಹೃದಯ ಸಾಮ್ರಾಟ್ ಪ್ರಧಾನಿ ಶ್ರೀ ನರೇಂದ್ರ ಮೋದಿ. ಯಾರು ಊಹಿಸಿರದ ರೀತಿಯಲ್ಲಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತ ದಿಟ್ಟ ನಿರ್ಧಾರಗಳನ್ನು ಕೈಗೊಂಡವರು ಮೋದಿಜೀ. ರಾಜಕೀಯವಾಗಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರು ತನ್ನ ಕುಟುಂಬಕ್ಕಾಗಿ ಯಾವುದೇ ಆಸ್ತಿ ,ಸಂಪತ್ತನ್ನು ಗಳಿಸದ ದೇಶವೇ ನನ್ನ ಆಸ್ತಿ ಎಂದು ದುಡಿಯುತ್ತಿರುವ ದಣಿವರಿಯದ ಜಗಮೆಚ್ಚಿದ ನಾಯಕ. ಪ್ರಧಾನಿಯಾದ ಬಳಿಕ ಇವರು ಅನುಷ್ಟಾನಕ್ಕೆ ತಂದ ಯೋಜನೆಗಳು ಪ್ರತೀ ಹಳ್ಳಿಯ ಬಡ ಜನರಿಗೆ ತಲುಪುತ್ತಿದೆಯೆಂದರೆ ಅದು ಅವರ ಭ್ರಷ್ಟಚಾರ ರಹಿತ ಆಡಳಿತಕ್ಕೆ ನಿದರ್ಶನ. ಸ್ವಂತಕ್ಕೆ ಏನನ್ನು ಬಯಸದ ಸರ್ವಸ್ವವನ್ನು ತಾಯಿ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟವರು ಇಂದು ನಮ್ಮ ದೇಶದ ಪ್ರಧಾನಮಂತ್ರಿಗಳಾಗಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಸೌಭಾಗ್ಯ. ಮೋದಿ ಜೀ ಯವರು ಬೆಳೆದು ಬಂದ ಹಾದಿ ಪ್ರತಿಯೊಬ್ಬರು ರೋಮಂಚನಗೊಳ್ಳುವಂತದ್ದು.ದೇಶಭಕ್ತ ಯುವಕರಿಗೆ ಅವರ ವ್ಯಕ್ತಿತ್ವವೇ ಸ್ಪೂರ್ತಿ. ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿ ಯುವಕನಾಗುವಷ್ಟರಲ್ಲಿ ಸಂಘದ ವಿಚಾರಧಾರೆಗಳಿಂದ ಪ್ರಭಾವಿತರಾಗಿ ,ಸಂಘದಿಂದ ಜೀವನದ ಉದ್ದೇಶವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿ ...

ಒರಿಪಾಗ ತುಳುನಾಡ್ದ ಸಂಸ್ಕೃತಿನ್, ಬುಲೆಪಾಗ ಅಪ್ಪೆ ಬಾಸೆನ್...

Image
✍ ಸುಭಿಕ್ಷ್ ರೈ ಪಿ Image Credit: Vikram B Acharya ತುಳುನಾಡ್, ದೈವ- ದೇವೆರ್ ನೆಲೆಯಾಯಿನ ಬೂಡು. ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಡ್ ತುಳುನಾಡ್ ಊರೊರ್ಮೆ ಪುಗಾರ್ತೆ ಪಡೆಯಿನ ಊರು. ಧಾರ್ಮಿಕವಾದ್, ಶೈಕ್ಷಣಿಕವಾದ್, ಸಾಮಾಜಿಕವಾದ್ ಪ್ರಜ್ಞಾವಂತ ಜನಕ್ಲ್ ಇಪ್ಪುನ, ರಾಜ್ಯ, ರಾಷ್ಟ್ರ , ಅಂತರರಾಷ್ಟ್ರೀಯ ಮಟ್ಟಡ್ ಮಾತ ಕ್ಷೇತ್ರಡ್ ಮಿನ್ಕೊಂದಿಪ್ಪುನ ಬೊಳ್ಳಿಲ್ ಪುಟ್ಟುದು ಬಲತಿನ ನಾಡ್. ಕಡಲ್, ಗುಡ್ಡೆ, ಕಂಗ್-ತಾರೆ, ಕಂಡೊಲು ಇಪ್ಪುನ ತುಳುನಾಡೆ ಪೊರ್ಲು ಪನ್ಪುನ ಒಂಜಿ ಕಡೆಟ್ ಆಂಡ, ಮುಲ್ಪ ನಡಪುನ ಕೋಲ, ಕಂಬುಲ, ತಂಬಿಲ, ನಾಗದೇವೆರೆನ ಆರಾಧನೆ,ಅಷ್ಟೆಮಿ, ಕೆಡ್ಡಸ, ಮಾರ್ನೆಮಿ, ಆಟ, ನಾಟಕ, ಪಿಲಿಗೊಬ್ಬು, ಜಾತ್ರೆ, ಕೋರ್ದಕಟ್ಟ ಇಂಚ ಸುಮಾರಾತ್ ಗೊಬ್ಬುಲು, ಆಟಿ ಅಮಾಸೆ,ತುಡರ್ ಪರ್ಬ, ಆಚರಣೆದ ಪೊರ್ಲು ಬೇತೆನೆ. ಆಂಡ ಇತ್ತೆ ಇತ್ತೆ ತುಳುನಾಡ್ದ ಸಂಸ್ಕೃತಿ ನಿಧಾನಡ್ ಮೂಲೆ ಸೇರೊಂದಿಪ್ಪುನ ಬೇಜಾರ್ದ ಸಂಗತಿ. ತುಳುನಾಡ್ದ ನಂಬಿಕೆ ಘಟ್ಟದ ಮಿತ್ತ್ ಮನರಂಜನೆದ ವಸ್ತುಲಾದ್ ಪೋವೊಂದುಂಡು. ತುಳುವೆರೆನ ಸ್ವಾಭಿಮಾನ ಕಡಿಮೆ ಆದ್ ಘಟ್ಟದ ಮಿತ್ತ್ದ ಆಚರಣೆಲ್ ತುಳುನಾಡ್ಡ್ ಜಾಲ್ಗ್ ಜತ್ತೊಂದುಂಡು. ತುಳುವೆರ್ ಬುದ್ದಿವಂತೆರ್ ಪನ್ಪೆರ್. ಆಂಡ, ತುಳುನಾಡ್ದ ವಿಚಾರಡ್ ನಮ ದಡ್ಡೆರಾವೊಂದುಲ್ಲ. ಊರುದ ಜವಾಂದಿ, ಜವನೆರ್ ಪೇಟೆ ಸೇರ್ದ್ ಪುಟ್ಟು ಬಲತಿನ ಊರುನೆ ಮರತೊಂದು ಇಪ್ಪುನಗ, ಊರುದ ಆಚಾರ-ವಿಚಾರದ ಗೇನ ಇತ್ತ್ಡ ವಿಶೇಷ. ತುಳುವೆರೆನ ಮಾ ...

ಯುದ್ಧ ಭೂಮಿಯಲ್ಲಿ ವರದಿಗಾರಿಕೆಯೆಂಬ ಎದೆಗಾರಿಕೆ... ✍ಸುಭಿಕ್ಷ್ ರೈ ಪಿ

Image
ನೇರ, ದಿಟ್ಟ, ನಿರಂತರ ಎಂಬ ಸುವರ್ಣ ನ್ಯೂಸ್ನ ವಾಕ್ಯದಂತೆ ಅಜಿತ್ ಹನುಮಕ್ಕನವರ್ ನೇರವಾಗಿ, ದಿಟ್ಟತನದಿಂದ, ನಿರಂತರವಾಗಿ ಇಸ್ರೇಲ್ ಕದನ ಭೂಮಿಯಿಂದ ಯುದ್ಧ ವರದಿಗಾರಿಕೆಯನ್ನು ಮಾಡುತ್ತಿದ್ದರೆ ಅದ್ಯಾಕೋ ಅಕ್ಷರ ರಾಕ್ಷಸ ರವಿಬೆಳಗೆರೆಯವರ ಕಾರ್ಗಿಲ್ನಲ್ಲಿ ಹದಿನೇಳು ದಿನಗಳು(ಯುದ್ಧ ವರದಿ), ದಳವಿ ಯವರ ಹಿಮಾಲಯನ್ ಬ್ಲಂಡರ್ (ಯುದ್ದ ಇತಿಹಾಸ) ಕನ್ನಡಾನುವಾದ ಓದಿದಾಗ ಆದ ರೋಮಾಂಚನದ ಅನುಭವ ಈಗ ಮತ್ತೆ ಆಗುತ್ತಿದೆ. ಸ್ಮಶಾನದಂತಾದ ಇಸ್ರೇಲ್, ಪ್ಯಾಲೇಸ್ತೀನ್ ರಣಭೂಮಿಯ ಚಿತ್ರಣ ಕಣ್ಣೆದುರಿಗಿದೆ. ಬೆಳಗೆರೆಯವರ ಕಾರ್ಗಿಲ್ ಕಥನವೆ ಕಣ್ಣಿಗೆ ಕಟ್ಟಿದಂತೆ ಯುದ್ಧ ಭೂಮಿಯ ಅನುಭವವನ್ನು, ಕೆಚ್ಚೆದೆಯ ಸೈನಿಕರ ಕಿಚ್ಚನ್ನು ತೆರೆದಿಟ್ಟರೆ ಈಗ ದೃಶ್ಯ ಮಾದ್ಯಮದ ಮೂಲಕ ನಮ್ಮ ಮುಂದೆ ಅಂತಹದೆ ಭೀಕರ, ಭಯಪೀಡಿತ, ನಿರಂತರ ರಣೋತ್ಸಾಹದಲ್ಲಿರುವ, ಸೇಡಿಗಾಗಿ ಹಪಹಪಿಸುತ್ತಿರುವ ಕದನ ಭೂಮಿಯಿಂದ ನೇರ ವರದಿಯನ್ನು ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ದಿಟ್ಟ ಪತ್ರಕರ್ತ ಅಜಿತ್ ಹನುಮಕ್ಕನವರ್ ಹಾಗೂ ಅವರ ಜೊತೆಯಾದ ಕ್ಯಾಮಾರ ಮ್ಯಾನ್ ಮೋಹನ್ ರವರು ಅದೇ ರವಿಬೆಳಗೆರೆಯವರ ಸಾಲಿನಲ್ಲಿ ಅದಕ್ಕಿಂತಲು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಕಾರಣ ಅವರಿರುವ ಜಾಗ. ಅದು ತಾಯ್ನಾಡು ಅಂತು ಮೊದಲೆ ಅಲ್ಲ.! ಹೇಳಿ ಕೇಳಿ ಯಾವ ಕ್ಷಣದಲ್ಲಾದರು, ಏನಾದರು ಕ್ಷಣಾರ್ಧದಲ್ಲಿ ಸಂಭವಿಸಿ ಹೋಗಬಹುದಾದ ಕಡಲಾಚೆಗಿನ ನಿರಂತರ ದಾಳಿ-ಪ್ರತಿದಾಳಿಯಾಗುತ್ತಿರುವ ಯುದ್ಧಭೂಮಿ. ಅಲ್ಲಿ ನಿಂತು ಮಾಡು...

ಬಾವಿಯೊಳಗಿನ ಕಪ್ಪೆಯಂತಿರಬೇಡ, ಒಳಗಿದ್ದು ಹೊರಪ್ರಪಂಚದ ಸವಿಯ ಕಳೆದುಕೊಳ್ಳಬೇಡ..

Image
Captured By: Subhiksh Rai P  ಸಂಕುಚಿತ ಮನೋಭಾವದಿಂದ ಹೊರಬಂದು ನೋಡಿದಾಗಲೇ ಈ ಪ್ರಪಂಚದ ವಿಸ್ತರತೆಯ ಅರಿವಾಗುವುದು ನಮಗೆ. ಒಂದಷ್ಟು ಯೋಚನೆಗಳನ್ನು ಮನಸ್ಸಿನಲ್ಲಿ  ತುಂಬಿಕೊಂಡು ಇಷ್ಟೆ ಇರುವುದು ನನಗೆಲ್ಲ ತಿಳಿದಿದೆ, ನಾನಿರುವ ರೀತಿಯೆ ಸರಿಯೆಂದುಕೊಂಡು ಬದುಕಿದರೆ, ಬದುಕಿನ ನೈಜ ಸ್ವಾದವನ್ನು ಕಳೆದುಕೊಂಡು ಬಿಡುತ್ತೇವೆ. ಆಲೋಚನೆಗಳು ವಿಶಾಲವಾಗಿದ್ದಾಗಷ್ಟೆ ಮಹಾತ್ಕಾರ್ಯಗಳು ನಡೆಯಲು ಸಾಧ್ಯ.  ಮನಸ್ಸು ತೆರೆದುಕೊಂಡರಷ್ಟೆ ಹೊಸತೊಂದು ಪ್ರಪಂಚದ ಅನುಭವವಾಗಲು ಸಾಧ್ಯ.  Comfort Zone ಬಿಟ್ಟು ಹೊರ ಬಂದರೆ ಅಧ್ಬುತ ಲೋಕವೊಂದು ನಮಗಾಗಿ ತೆರೆದುಕೊಳ್ಳುತ್ತ ಹೋಗುತ್ತದೆ. ಆ zone ನಿಂದ ಹೊರಬರಲು ಸ್ವಲ್ಪ ಕಷ್ಟವಾಗಬಹುದು ಆದರೆ ಅಸಾಧ್ಯವೇನಲ್ಲ. ಎಲ್ಲದಕ್ಕು ನಮ್ಮ ಮನಸ್ಸು ಸಿದ್ಧವಿರಬೇಕಷ್ಟೆ. ಇಲ್ಲಿ ಬಾವಿಯೊಲಗಿನ ಕಪ್ಪೆ ಬಾವಿಯನ್ನೆ ಪ್ರಪಂಚವೆಂದುಕೊಂಡು ಹೊರಬರದೆ ಹೋಗಿದ್ದರೆ ಅದಕ್ಕೆ ಈ ವಿಶಾಲ ಜಗತ್ತಿನ ಸೌಂದರ್ಯದ ಅನುಭವವೆ ಆಗುತ್ತಿರಲಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆ ಜಿಗಿದು ಕುಣಿಯಲು ಅವಕಾಶವೆ ಸಿಗುತ್ತಿರಲಿಲ್ಲ.  ಹೀಗೆ ನಮ್ಮ ಬದುಕಿನಲ್ಲು ಅಷ್ಟೆ ಅವಕಾಶಗಳೆ ಇಲ್ಲ, ಇರುವುದೇ ಇಷ್ಟು ಎಂದುಕೊಂಡರೆ ಹೊಸತನ್ನು ಪ್ರಯತ್ನಿಸುವ, ಕಲಿಯುವ ಉತ್ಸಾಹವೆ ಇರದಿದ್ದರೆ ನಮ್ಮ ಬದುಕು ಬಾವಿಯೊಳಗಿನ ಕಪ್ಪೆಯಂತೆ..! ✍ಸುಭಿಕ್ಷ್ ರೈ ಪಿ

ನೀ ದಣಿದು Honey ಗಾಗಿ ಬಂದು, ನನಗೆ Money ಯಾದೆ..😁

Image
 Captured By: Subhiksh Rai P  🏆Award Winning Shot: Bombay Bunts Association Youth Wing Presents YUVIKA 2020 - Runner Up ಕೆಲವೊಮ್ಮೆ ನಮ್ಮ ಮನಸ್ಸಿನ ಖುಷಿಗಾಗಿ ಇರುವ ನಮ್ಮ ಹವ್ಯಾಸ ನಮಗರಿವಿಲ್ಲದಂತೆ ಬೆಳೆದು ಕಲೆಯಾಗಿ ಮುಂದೆ ಬದುಕಿಗದುವೆ ದಾರಿಯಾಗಿ ಎಷ್ಟೋ ಮನೆಯನ್ನು ಬೆಳಗಿದ ಉದಾಹರಣೆ ನಮ್ಮ ಕಣ್ಣೆದುರಿಗೆ ನೂರಾರಿದೆ. ಹಾಗಾಗಿ ನಮ್ಮ ಆಸಕ್ತಿಯ ವಿಷಯಗಳು ಬೇರೆಯವರಿಗೆ ಸಣ್ಣಪುಟ್ಟ ವಿಚಾರವಾಗಿದ್ದರು ನಮಗದು ದೊಡ್ಡ ಖುಷಿಯನ್ನು ಕೊಡುವಂತಿದ್ದರೆ ಮುಂದುವರೆಸಿ. ಯಾರಿಗೆ ಗೊತ್ತು ಮುಂದೆ ಅದು ದೊಡ್ಡ ಗೆಲುವನ್ನು , ನಮಗೆ ಗೌರವ ಹೆಸರನ್ನು ತಂದು ಕೊಡಲೂ ಬಹುದು. ಹೀಗೆ ಒಮ್ಮೆ ನಾನು ಸುಮ್ಮನೆ ತೋಟದಲ್ಲಿ ಕುಳಿತಿರಲು ಪಕ್ಕದಲ್ಲೆ ಇದ್ದ ಹೂವಿನ ಮಕರಂದವ ಸವಿಯಲು ಬಂದ ಜೇನು ಹುಳವೊಂದನ್ನು ಕಂಡು ಕ್ಯಾಮರ ಕಣ್ಣು ಅದರತ್ತ ಹೋಯಿತು. ಅದರ ಹತ್ತಿರ ಕೈ ಹೋದಾಗ ಹಾರಿ ಹೋಗುವ ಸಂಭವವಿದ್ದುದರಿಂದ ತಾಳ್ಮೆ, ಫೋಕಸ್ ಆಗುವವರೆಗೆ ಕೈ ನಡುಗದಂತೆ ಹಿಡಿಯಲು ಏಕಾಗ್ರತೆಯು ಬೇಕಿತ್ತು. ಹೇಗೋ ಒಂದಷ್ಟು ಹೊತ್ತು ಕಾದು ಕ್ಲಿಕ್ಕಿಸಿದ್ದು ಆಯಿತು. ಅದು ತನಗರಿವಿಲ್ಲದೆ  ಸಿಕ್ಕ ಹೂವಿನ ಮಕರಂದದ ಸಿಹಿಯ ಸವಿಯುತ್ತಿದ್ದರೆ ನಾನು ಪ್ರಕೃತಿಯ ಸೌಂದರ್ಯದ ಈ ನೋಟವನ್ನು ಸವಿಯುತ್ತಿದೆ. ಹೀಗೆ ಸುಮ್ಮನೆ ಅರೆ ಕ್ಷಣದ ಖುಷಿಗಾಗಿ ತೆಗೆದ ಆ ಫೋಟೋ ಮುಂದೆ ಮುಂಬೈ ಯಲ್ಲಿ ನಡೆದ ಪ್ರತಿಷ್ಠಿತ ಬಂಟ್ಸ್ ಅಸೋಸಿಯೇಶನ್ ಯೂತ್ ವಿ...

ಒಗ್ಗಟ್ಟಿನಲ್ಲಿ ಬಲವಿದೆ...

Image
Captured By: Subhiksh Rai P ಪ್ರಕೃತಿ ನಿಯಮದಂತೆ ಹುಳುವೊಂದು ಸತ್ತಿರಲು ಕೆಂಪಿರುವೆಗಳೆಲ್ಲ ಮುತ್ತಿಕ್ಕಿಕೊಂಡವು. ಆದರೆ ಯಾವುದೆ ಇರುವೆಗೂ ತನಗಿಂತ ದೈತ್ಯ ಗಾತ್ರದ ಹುಳುವನ್ನು ಅಲ್ಲಿ ಒಂಟಿಯಾಗಿ ಸಾಗಿಸಲು ಅಸಾಧ್ಯವಾಗಿತ್ತು. ಆದರೆ ಶ್ರಮಜೀವಿಯಾದ ಅವುಗಳ ಒಗ್ಗಟ್ಟು ಮಾತ್ರ ಅಸಾಧ್ಯವನ್ನು ಸಾಧ್ಯವಾಗಿಸಿ ಒಮ್ಮೆ ಅವುಗಳನ್ನೆ ದಿಟ್ಟಿಸಿ ನೋಡುತ್ತಿದ್ದ ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಹಾಗೇ ಅವುಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಪ್ರೇಕ್ಷಕನಾಗಿದ್ದ ನನ್ನ ಫೋನ್ ಕ್ಯಾಮರಾಗೆ ಸೆರೆ ಸಿಕ್ಕ ಶ್ರಮಜೀವಿಗಳಿವರು..! ✍ಸುಭಿಕ್ಷ್ ರೈ ಪಿ

ಬಣ್ಣದ ಚಿಟ್ಟೆ, ಅರೆ ಕ್ಷಣ ನನ್ನ ಕಣ್ಣಂಚನು ಸೆಳೆದು ಬಿಟ್ಟೆ..🦋

Image
Captured By: Subhiksh Rai P  🦋ಹೇ ಚಿಟ್ಟೆ... ತೊಟ್ಬಿರುವೆ ನೀ ಬಣ್ಣ ಬಣ್ಣದ ಬಟ್ಟೆ . ಹೂವಿನ ಮಕರಂದವ ಸವಿದು ಮುತ್ತನ್ನು ಕೊಟ್ಟೆ, ಹೀಗೆ ಪ್ರಕೃತಿಯ ಸೌಂದರ್ಯಕ್ಕೆ ಹೊಸತೊಂದು ಸೃಷ್ಟಿಗೆ ನೀ ಕೊಡುಗೆಯಾಗಿ ಬಿಟ್ಟೆ. ನಮ್ಮ ಕಣ್ಣು ಸೆಳೆದು ಬಿಟ್ಟು, ನೀ ಹಾರಿ ಹೊರಟೇ ಬಿಟ್ಟೆ... ಹೇ ಬಣ್ಣದ ಚಿಟ್ಟೆ...🦋 📝ಸುಭಿಕ್ಷ್ ರೈ ಪಿ