ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.

✍🏻 ಸುಭಿಕ್ಷ್.ರೈ.ಪಿ Image Credit: Respected Owner ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ವ್ಯಕ್ತಿ ನಮ್ಮೆಲ್ಲರ ಹೆಮ್ಮೆಯ ಭಾರತ ಹೃದಯ ಸಾಮ್ರಾಟ್ ಪ್ರಧಾನಿ ಶ್ರೀ ನರೇಂದ್ರ ಮೋದಿ. ಯಾರು ಊಹಿಸಿರದ ರೀತಿಯಲ್ಲಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತ ದಿಟ್ಟ ನಿರ್ಧಾರಗಳನ್ನು ಕೈಗೊಂಡವರು ಮೋದಿಜೀ. ರಾಜಕೀಯವಾಗಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರು ತನ್ನ ಕುಟುಂಬಕ್ಕಾಗಿ ಯಾವುದೇ ಆಸ್ತಿ ,ಸಂಪತ್ತನ್ನು ಗಳಿಸದ ದೇಶವೇ ನನ್ನ ಆಸ್ತಿ ಎಂದು ದುಡಿಯುತ್ತಿರುವ ದಣಿವರಿಯದ ಜಗಮೆಚ್ಚಿದ ನಾಯಕ. ಪ್ರಧಾನಿಯಾದ ಬಳಿಕ ಇವರು ಅನುಷ್ಟಾನಕ್ಕೆ ತಂದ ಯೋಜನೆಗಳು ಪ್ರತೀ ಹಳ್ಳಿಯ ಬಡ ಜನರಿಗೆ ತಲುಪುತ್ತಿದೆಯೆಂದರೆ ಅದು ಅವರ ಭ್ರಷ್ಟಚಾರ ರಹಿತ ಆಡಳಿತಕ್ಕೆ ನಿದರ್ಶನ. ಸ್ವಂತಕ್ಕೆ ಏನನ್ನು ಬಯಸದ ಸರ್ವಸ್ವವನ್ನು ತಾಯಿ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟವರು ಇಂದು ನಮ್ಮ ದೇಶದ ಪ್ರಧಾನಮಂತ್ರಿಗಳಾಗಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಸೌಭಾಗ್ಯ. ಮೋದಿ ಜೀ ಯವರು ಬೆಳೆದು ಬಂದ ಹಾದಿ ಪ್ರತಿಯೊಬ್ಬರು ರೋಮಂಚನಗೊಳ್ಳುವಂತದ್ದು.ದೇಶಭಕ್ತ ಯುವಕರಿಗೆ ಅವರ ವ್ಯಕ್ತಿತ್ವವೇ ಸ್ಪೂರ್ತಿ. ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿ ಯುವಕನಾಗುವಷ್ಟರಲ್ಲಿ ಸಂಘದ ವಿಚಾರಧಾರೆಗಳಿಂದ ಪ್ರಭಾವಿತರಾಗಿ ,ಸಂಘದಿಂದ ಜೀವನದ ಉದ್ದೇಶವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿ ...